
25th March 2025
ಕಲಬುರಗಿ:- ನಗರದ ಜಿಲ್ಲಾ ಪಂಚಾಯತ ಅವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ
ಜಿಲ್ಲೆಯ ಭೂಪಾಲ ತೆಗನೂರ ಗ್ರಾಮ ಪಂಚಾಯತ ಅಭಿವದ್ಧಿ ಅಧಿಕಾರಿಯನ್ನು ಕೂಡಲೆ ಕೆಲಸದಿಂದ ವಜಾಗೊಳಿಸವ ಬಗ್ಗೆ ಜಿಲ್ಲಾ ಅಧ್ಯಕ್ಷರಾದ ಅಣವಿರಪ್ಪ ಎಸ್. ಹೆಬ್ಬಾಳ ಅವರ ಸಮುಖದಲ್ಲಿ
ಮನವಿ ಪತ್ರ ಸಲ್ಲಿಸಿದ್ದರು .
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಭೂಪಾಲ ತೆಗನೂರ ಗ್ರಾಮ. ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಜನರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಸೇನೆ, ರೈತಪರ ಹೋರಾಟ ಸಂಘಕ್ಕೆ ಸಲ್ಲಿಸಿರುವ ದೂರಿನನ್ವಯ ಈ ಕೆಳಕಂಡ ಶ್ರೀ ಸೂರ್ಯಾಕಾಂತ ಬೆಳಗುಂಪಿ ಗ್ರಾಂ ಪಂಅಭಿವದ್ಧಿ ಅಧಿಕಾರಿಯು ಸರಕಾರ ನೀಡಿರುವ ಜವಬ್ದಾರಿಯುತ ಹುದ್ದೆಯನ್ನು ಸರಿಯಾಗಿ ನಿರ್ವಹಿಸದೆ ಪಂಚಾಯಿತಿ ಕಾರ್ಯಲಯಕ್ಕೆ ದಿನಾಲು ಹಾಜರಾಗದೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅನಾವಶ್ಯಕವಾಗಿ ತೊಂದರೆ ಯಾಗುತ್ತಿದ್ದು, ಪಂಚಾಯತ ಕಾರ್ಯಲಯದ ಅಧ್ಯಕ್ಷರು ಮತ್ತು ಸದಸ್ಯರು ಹಲವಾರು ಬಾರಿ ಸರಕಾರ ನೀಡಿರುವ ಹುದ್ದೆಯನ್ನು ದಿನಾಲು ಕಾರ್ಯಲಯಕ್ಕೆ ಹಾಜರಗಿ ಸಾರ್ವಜನಿಕರ ಕೆಲಸಗಳನ್ನು ಸರಿಯಾದ ನಿಟ್ಟಿನ್ನಲ್ಲಿ ನಿರ್ವಹಿಸಬೆಕೆಂದು ಹಲವಾರು ಬಾರಿ ಗ್ರಾಮ ಪಂಚಾಯತ ಸಭೆಯಲ್ಲಿ ಮನವಿ ಮಾಡಿಕೊಂಡರು ನಿರ್ಲಕ್ಷಿಸುತ್ತಿದ್ದು ಕೂಡಲೆ ಇಂತಹ ಅಧಿಕಾರಯ ವಿರುದ್ಧ ಸೂಕ್ತ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಿ ಇವರಮೇಲೆ ಕಾನೂನ ರೀತಿಯ ಕ್ರಮ ಜರುಗಿಸಿ ಕೂಡಲೆ ಅಧಿಕಾರದಿಂದ ವಜಾಗೊಳಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಕೆಳಕಂಡ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರ ವಿನಂತಿಯ ಮೇರೆಗೆ ನಮ್ಮ ಸಂಘದ ವತಿಯಿಂದ ಮತ್ತೊಮ್ಮೆ ಕಳಕಳಿಯಿಂದ ಮನವಿ ವಿನಂತಿಸಿಕೊಂಡರು
ಬೊಮ್ಮಗೊಂಡೇಶ್ವರ ಉತ್ಸವದಲ್ಲಿ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿಕೆ ಬೊಮ್ಮಗೊಂಡೇಶ್ವರ ತತ್ವಗಳ ಪ್ರಚಾರ ಆಗಲಿ